ಗರ್ವ

0
3

ಆರು ಹಿತವರು ನಿನಗೆ
ಈ ಮೂವರೊಳಗೆ
ನಾರಿಯೊ ಧಾರುಣಿಯೊ
ಬಲು ಧನದ ಸಿರಿಯೊ

ಆರು ಹಿತವರು ನಿನಗೆ
ಈ ಮೂವರೊಳಗೆ ಈ ಮೂವರೊಳಗೆ

ಮುನ್ನ ಶತ ಕೋಟಿ
ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ .. ೨

ಬಿನ್ನಣದ ಮನೆ ಕಟ್ಟಿ
ಕೋಟೆ ಕೊತ್ತಳ ವಿಕ್ಕಿ
ಚೆನ್ನಿಗನು ಅಸುವಳಿಯೆ
ಹೊರಗೆ ಹಾಕುವರೂ

ಆರು ಹಿತವರು ನಿನಗೆ
ಈ ಮೂವರೊಳಗೆ ಈ ಮೂವರೊಳಗೆ

ಉದ್ಯೋಗ ವ್ಯವಹಾರ ನೃಪ ಸೇವೆ
ಕುಶಲ ಗತಿ ಕ್ಷುದ್ರತನ ಕಳವು ಪರ ದ್ರೋಹದಿಂದ .. ೨

ಬುದ್ಧಿಯಿಂದಲಿ ಗಳಿಸಿ ಇಟ್ಟಿದ್ದ ಅರ್ಥವನು
ಬುದ್ಧಿಯಿಂದಲಿ ಗಳಿಸಿ ಇಟ್ಟಿದ್ದ ಅರ್ಥವನು
ಸತ್ಯದಲಿ ಆರು ಉಂಬುವರು ಹೇಳೊ ಮನುಜಾ

ಆರು ಹಿತವರು ನಿನಗೆ
ಈ ಮೂವರೊಳಗೆ ಈ ಮೂವರೊಳಗೆ

Rate this post
Previous articleಕ್ಷೀರಾಬ್ಧಿ ಕನ್ನಿಕೆ
Next articleಭಲೆ ಭಾಸ್ಕರ್ (1971) – ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ

LEAVE A REPLY

Please enter your comment!
Please enter your name here